ನಿನ್ನಿಂದಲೇ ನಿನ್ನಿಂದಲೇ ಲಿರಿಕ್ಸ್ Ninnidale Kannada Song by Bigboss Lyrics

Ninnidale

ನಿನ್ನಿಂದಲೇ ನಿನ್ನಿಂದಲೇ ಲಿರಿಕ್ಸ್

ಹೆ ಹೆ ಹೇ... ಹಾ ಹಾ ಹಾ...

ತನನಾನ್ ನನನಾನ ತನನಾನನನಾ....

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗಾ
ಹಾಯಾಗಿ ನಿಂತಿರುವೆ ಸರಿ ಏನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿ ಏನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟಾ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೆ
ಮುದ್ದಾದ ಕರೆ ಬಂದಿದೆ

ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ

ಚಿತ್ರ             : ಮಿಲನ  (2007)
ಗಾಯಕರು   : ಸೋನು ನಿಗಂ
ಸಂಗೀತ        : ಮನೋಮೂರ್ತಿ
ಸಾಹಿತ್ಯ        : ಜಯಂತ್  ಕಾಯ್ಕಿಣಿ 

Post a Comment

0 Comments