
Jena Daniyole Kannada Song By Bigboss Lyrics

ಜೇನ ದನಿಯೊಳೆ ಮೀನ ಕಣ್ಣೋಳೆ ಲಿರಿಕ್ಸ್
ದ್ವಾಪರ ದಾಟುತ ನನ್ನನೆ ನೋಡಲು
ನನ್ನನೆ ಸೇರಲು ಬಂದ ರಾಧಿಕೆ
ಹಾಡಲಿ ಹಾಡಲು ಮತಾಲಿ ಹೇಳಲು
ಸಾಧ್ಯವೇ ಇಲ್ಲದ ರಾಗ ಮಾಲಿಕೆ.
ನನ್ನನೆ ಸೇರಲು ಬಂದ ರಾಧಿಕೆ
ಹಾಡಲಿ ಹಾಡಲು ಮತಾಲಿ ಹೇಳಲು
ಸಾಧ್ಯವೇ ಇಲ್ಲದ ರಾಗ ಮಾಲಿಕೆ.
ಸಖಿ ಸಖಿ ನನ್ನ ರೂಪಸಿ
ಸಖಿ ಸಖಿ ನಿನ್ನ ಮೋಹಿಸಿ
ನೀನೆ.................. ನನ್ನ ಪ್ರೇಯಸಿ
ಜೇನ ದನಿಯೊಳೆ ಮೀನ ಕಣ್ಣೋಳೆ
ಸೊಬಗೆ ಮೈತುಂಬಿದೆ ಹಂಸ ನಡಿಯೊಳೆ
ಎದೆಗೆ ಇಳಿದೊಳೆ ಜೀವ ಝಲ್ ಎಂದಿದೆ.
ಬೇರೆ ದಾರಿನೂ ಇಲ್ಲ ನನಗಿನ್ನೂ
ನೀನು ಸಿಕ್ಕಾಗಿದೆ ನಾನು ಹುಡುಕಿದ್ದು
ನನ್ನ ನಿಲ್ದಾಣ ನೀನೆ ಇನ್ನೇನಿದೆ....
ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೇ
ವೆರೋನಿಕಾ ಶಿಫಾಲಿಕ ಇವಾಂಶಿಕ ನೀನೇನೆ.
ಅರಳದ ಸುಮಗಳ ಅರಳಿಸುವವಳು
ಕುಸುಮಗಳಂತ ಬೆರಳು
ಚೆನ್ಮಲ್ಲಿಗೆಯಂತಿವೆ ಬೆರಳು
ಗಿಳಿಗಳ ಬಳಗಕೆ ಸರಿಗಮ ಕಲಿಸುವ
ಇನಿಧನಿ ಜಿನುಗು ಕೊರಳು
ಬಲು ವಿಸ್ಮಯ ನಿನ್ನ ಕೊರಳು
ಸೌಮದರ್ಯದಲ್ಲಿ ಗಾಂಭೀರ್ಯಾವಂತೆ
ಆಂತರ್ಯದಲ್ಲಿ ಔದಾರ್ಯವಂತೆ
ನೀನೆ ...............ನನ್ನ ಪ್ರೇಯಸಿ
ಪಾದ ಪದ್ಯಾನ ಬರೆದ ಹಾಗಿರುವ
ಹೆಜ್ಜೆಯ ಮುದ್ರೆಯೂ.......
ನಿನ್ನ ನಡೆಕಂಡು ಹಿಂದೆ ಬರಬಹುದು
ತುಂಗೆಯು ಭದ್ರೆಯೂ......
ನಾಹು ಶ್ರೀಕೃಷ್ಣ ನೀನೂ ನನ ಭಾಮೆ
ಮೂಡಿದೆ ಪ್ರೀತಿಯೂ......
ಎಷ್ಟು ಜನ್ಮಗಳ ದಾಟಿ ಬಂದಾಯ್ತು
ಈ ಕ್ಷಣ ಸಾಕ್ಷಿಯೂ.......
ಲೀಲಾವತಿ ಶರಾವತಿ ನೀಲಾವತಿ ಹೆಸರೇನೇ
ಗಂಗಾವತಿ ತುಂಗಾವತಿ ನೇತ್ರಾವತಿ ನೀನೆನೇ
ನೀ ನೆಕ್ಕರೆ ಸಕ್ಕರೆ ಅರ್ರೆರೆ ಇಂದು
ಬ್ರಹ್ಮನಿಗೂನು ಬೆರಗು ನೀನೆಂದರೆ
ಬೆರಗಿಗೂ ಬೆರಗು.
ಬರೆದರೆ ಮುಗಿಯದು ಪದದಲಿ
ಸಿಗದು ರತಿಯರಿಗಿಂತ ಸೊಬಗು
ಮೈ ಮಾಟವೇ ಮೋಹಕ ಸೊಬಗು
ಲಾವಣ್ಯ ನೋಡಿ ನಾ ಧನ್ಯನಾದೆ
ತಾರುಣ್ಯ ಮೋಡಿ ಹೀಗಾಗಿ ಹೋದೆ
ನೀನೇ................ನನ್ನ ಪ್ರೇಯಸಿ.
ಜೇನ ದನಿಯೊಳೆ ಮೀನ ಕಣ್ಣೋಳೆ
ಸೊಬಗೇ ಮೈತುಂಬಿದೆ ಹಂಸ ನಡಿಯೊಳೆ
ಎದೆಗೆ ಇಳಿದೊಳೆ ಜೀವ ಝಲ್ ಎಂದಿದೆ.
ಬೇರೆ ದಾರಿನೂ ಇಲ್ಲ ನನಗಿನ್ನೂ
ನೀನು ಸಿಕ್ಕಾಗಿದೆ ನಾನು ಹುಡುಕಿದ್ದು
ನನ್ನ ನಿಲ್ದಾಣ ನೀನೇ ಇನ್ನೇನಿದೆ.
0 Comments