![]() |
Chutu Chutu Rambo-2 Movie Song By BigBoss Lyrics |
ಚುಟು ಚುಟು ಅಂತೈತಿ ಲಿರಿಕ್ಸ್
🙎♂️ಏ ಹುಡುಗಿ ಯಾಕ್ಹಿಂಗಾಡ್ತಿ
ಮಾತಲ್ಲೇ ಮಳ್ಳ ಮಾಡ್ತಿ
ವರ್ಷಾತು ಹಿಂಗ ಆಡ್ತಿ
ಸಿಗವಲ್ಲಿ ಕೈಗೆ..
👩 ಏ ಹುಡುಗ ಯಾಕೊ ಕಾಡ್ತಿ
ಸಿಕ್ಕಲ್ಲೇ ಸಿಗ್ನಲ್ ಕೊಡ್ತಿ
ದಿನಕೊಂದು ಡೈಲಾಗ್ ಹೊಡಿತಿ
ಹ್ಯಾಂಗೈತಿ ಮೈಗೆ
🙎♂️ ನಿನ್ನ ನಡುವು ಸಣ್ಣೈತಿ
ನಡಿಗೆ ಕಣ್ ಕುಕ್ಕೇತಿ
ನಿನ್ನ ಗುಂಗಾ ಏರೇತಿ
ಮನ್ಸು ಮಂಗ್ಯಾ ಆಗೇತಿ
ನನ್ನ ತಲಿಯ ಕೆಡಿಸೇತಿ...
ಏ ಹುಡುಗಿ
👩 ಏನ ಮಾವ?
🙎♂️ ಚುಟು ಚುಟು
👩 ಎಲ್ಲಿ?
🙎♂️ ಚುಟು ಚುಟು ಅಂತೈತಿ.. ನನಗ
ಚುಮು ಚುಮು ಆಗ್-ತೈತಿ..
ಚುಟು ಚುಟು ಅಂತೈತಿ.. ನನಗ
ಚುಮು ಚುಮು ಆಗ್-ತೈತಿ...
👩 ಜಾತ್ರಿ ಜಾಗರಣೆಯಾಗ
ಸಂತೇ ಬಜಾರದಾಗ
ಸಾಲ ಕೊಟ್ಟೋನಂಗ ಕಾಡ್ತಿ.. ಹ್ಮಾ
ಕಣ್ಣಲ್ಲೇ ಮಿಸ್-ಕಾಲ ಕೊಡತಿ..
🙎♂️ ಊರ್-ತುಂಬ ಹುಡ್ಗಿರಿದ್ರೂ
ನಿನಮ್ಯಾಲ ನನ್ನ-ನೆದರು
ಮನಸಿದ್ರು ಇಲ್ದ್ಹಾಂಗ ನುಲಿತಿ...
ಇದನ್ಯಾವ ಸಾಲ್ಯಾಗ ಕಲತಿ...
👩 ಮನಸಲಿ ಹುಡುಗ ಮಸಾಲೆ ಅರಿತಿ
ಸಿಕ್ಕಲಿ ಸೀಜ ಮಾಡಾಕ ಬರತಿ
🙎♂️ ನಿನ್ನ ನೋಟಕ
ಮೈ ಮಾಟಕ
ಬ್ಯಾಲ..ನ್ಸ ತಪ್ಪೇತಿ..
ಏ ಹುಡುಗಿ
👩 ಏನ ಮಾವ?
🙎♂️ ಚುಟು ಚುಟು ಅಂತೈತಿ.. ನನಗ
ಚುಮು ಚುಮು ಆಗ್-ತೈತಿ..
ಚುಟು ಚುಟು ಅಂತೈತಿ.. ನನಗ
ಚುಮು ಚುಮು ಆಗ್-ತೈತಿ..
🙎♂️ ಊರ್ ಹಿಂದ ಬಾಳೆ ತೋಟ
ಊರ್ ಮುಂದ ಖಾಲಿ ಸೈಟ
ಇದಕೆಲ್ಲ ನೀನಾಗ ಒಡತಿ...
ಮತ್ಯಾಕ ಅನುಮಾನ ಪಡತಿ..
👩 ಹ್ಹಾ ಶೋಕಿಗೆ ಸಾಲ ಮಾಡಿ
ತಂದೀದಿ ಬುಲ್ಲೆಟ್ ಗಾಡಿ
ನನ್ನೋಡಿ ಡಬ್ಬಲ್ ಹಾರನ್
ಹೊಡಿತಿ...
ಊರಾಗ ನೀನೆಷ್ಟೋ ಮೆರಿತಿ...
🙎♂️ ಊರಾಗ ನಂದೊಂದ್ ಲೇವಲ್ಲ ಐತಿ
ದಾರ್ಯಾಗ್ ನಿಂತು ಯಾಕ ಬೈತಿ
👩 ಎಷ್ಟ ಕಾ..ಡತಿ
ಮಳ್ಳ ಮಾ..ಡತಿ
ಮನಸ್ಹ್ಯಾಂಗ ತಡಿತೈತಿ..ಈ...ಇ
ಮಾವ
🙎♂️ ಏನ ಹುಡುಗಿ?
👩 ಚುಟು ಚುಟು ಅಂತೈತಿ.. ನನಗೂ
ಚುಮು ಚುಮು ಆಗ್-ತೈತಿ..
ಚುಟು ಚುಟು ಅಂತೈತಿ.. ನನಗೂ
ಚುಮು ಚುಮು ಆಗ್-ತೈತಿ..ಈಈ
ಚುಟು ಚುಟು ಅಂತೈತಿ.. ನನಗೂ
ಚುಮು ಚುಮು ಆಗ್-ತೈತಿ..ಈಈಈ
0 Comments